ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇನ್ನು ಮುಂದೆ ಉಡಾವಣಾ ವಾಹನಗಳನ್ನು ತಯಾರಿಸುವುದಿಲ್ಲ, ಬದಲಾಗಿ ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲಿದೆ. ಈ ಉತ್ಪಾದನಾ ಕಾರ್ಯವನ್ನು ಖಾಸಗಿ ವಲಯಕ್ಕೆ ವಹಿಸಿಕೊಡುವ ನಿರ್ಧಾರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ನವದೆಹಲಿ: ‘ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಡಾವಣಾ ವಾಹನಗಳ ತಯಾರಿಯನ್ನು ನಿಲ್ಲಿಸಲಿದ್ದು, ಅವುಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಿಕೊಡಲಿದೆ’ ಎಂದು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನೆ ಕೇಂದ್ರದ (ಇನ್-ಸ್ಪೇಸ್) ಅಧ್ಯಕ್ಷ ಪವನ್ ಗೋಯೆಂಕಾ ತಿಳಿಸಿದ್ದಾರೆ. ಇದು ರಾಜಕೀಯ ವಾದ- ಪ್ರತಿವಾದಕ್ಕೆ ಕಾರಣವಾಗಿದೆ.
ಬಿಸಿನೆಸ್ ಟುಡೆ ಆಯೋಜಿಸಿದ್ದ ಭಾರತ
ಖಾಸಗಿ ವಲಯಕ್ಕೆ ವರ್ಗಾವಣೆಯಾಗುವ ನಿರೀಕ್ಷೆ
‘ಈ ಪರಿವರ್ತನೆಯ ಮೊದಲ ಹೆಜ್ಜೆಯಾಗಿ ಈಗಾಗಲೇ ‘ಸ್ಮಾಲ್ ಸ್ಯಾಟಲೈಟ್’ನ ತಂತ್ರಜ್ಞಾನ ಮತ್ತು ಉತ್ಪಾದನಾ ಹಕ್ಕುಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.ಗೆ (ಎಚ್‌ಎಎಲ್) ಹಸ್ತಾಂತರಿಸಲಾಗಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮತ್ತು ಲಾಂಚ್ ವೆಹಿಕಲ್ ಮಾರ್ಕ್-3ಗಳ (ಎಲ್‌ವಿಎಂ3) ಉತ್ಪಾದನೆಯೂ ಖಾಸಗಿ ವಲಯಕ್ಕೆ ವರ್ಗಾವಣೆಯಾಗುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ’ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಕಿಡಿ:
ಗೋಯೆಂಕಾ ಹೇಳಿಕೆಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ‘ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇಸ್ರೋದ ಭವಿಷ್ಯದ ಕುರಿತಾದ ವರದಿಗಳು ಕಳವಳ ಹುಟ್ಟುಹಾಕಿವೆ. ಸರ್ಕಾರ ಇಸ್ರೋವನ್ನು ಉಸಿರುಗಟ್ಟಿಸುತ್ತಿದ್ದು, ಅದರ ಸಾಮರ್ಥ್ಯಗಳನ್ನು ಕುಂದಿಸುತ್ತಿದೆ. ಪರಮಾಣು ಶಕ್ತಿಯ ವಿಷಯದಲ್ಲಿ ಕೈಗೊಂಡಂತೆಯೇ, ಬಾಹ್ಯಾಕಾಶ ವಿಷಯದಲ್ಲೂ ಆಕ್ರಮಣಕಾರಿ ಖಾಸಗೀಕರಣವನ್ನು ಅನುಸರಿಸುತ್ತಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: DRDO: ಚೀನಾ-ಪಾಕಿಸ್ತಾನದ ನಿದ್ದೆಗೆಡಿಸಿದ DRDOನ ಆ ಒಂದು ಹೆಜ್ಜೆ! ಎಂಟ್ರಿಯಾಯ್ತು ದೇಶದ ಅತ್ಯಂತ ಕ್ಷಿಪ್ರ ಹಾಗೂ ಮಾರಕ ಕ್ಷಿಪಣಿ!
ಬಿಜೆಪಿ ಸಮರ್ಥನೆ:
ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ‘ಸರ್ಕಾರದ ಈ ನಡೆಯು ಇಸ್ರೋದ ಪರಂಪರೆಯನ್ನು ದುರ್ಬಲಗೊಳಿಸುವುದಿಲ್ಲ. ಬದಲಾಗಿ ಇದು ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಯ ವಿಸ್ತರಣೆಯಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ISRO ಹೊಸ ಹೆಜ್ಜೆ, ಬಾಹ್ಯಾಕಾಶ ಕ್ಷೇತ್ರ ಖಾಸಗೀಕರಣದತ್ತ NASA ಹಾದಿಯಲ್ಲಿ ಭಾರತ


